Tuesday, October 24, 2017

ಇಲ್ಲಿರುವುದು ಧಾರ್ಮಿಕ ಸಂಬಂಧವಲ್ಲ.ಇಲ್ಲಿರುವುದು ನಾಗರೀಕ ಸಂಬಂಧ

ಕೆಲದಿನಗಳ ಹಿಂದೆ ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈಯವರು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರನ್ನು ಕೆಲವಿಷಯಗಳಿಗೆ ಸಂಬಂಧಿಸಿದಂತೆ ಟೀಕಿಸಿದಾಗ ಕೆಲ ಭಕ್ತಪ್ರೇಮಿಗಳು ಪ್ರಕಾಶ್ ರೈಯವರ ತಾಯಿ ಕ್ರೈಸ್ತ ಧರ್ಮದವಳು,ಆತ ಕ್ರೈಸ್ತ ಮಿಷನರಿಗಳ ಕೃಪೆಯಿಂದ ಪ್ರಖ್ಯಾತ ಕಲಾವಿದನಾಗಿದ್ದಾನೆ,ಕ್ರೈಸ್ತನಾದ ಕಾರಣ ಆತ ಮೋದಿ ಹಾಗೂ ಯೋಗಿಯವರನ್ನು ಟೀಕಿಸುತ್ತಿದ್ದಾನೆ ಎಂಬ ಅಪವಾಧವನ್ನು ಆವರ ಮೇಲೆ ಹೊರಿಸಲಾಯಿತು.ಈಗ ತಮಿಳು ನಟ ವಿಜಯ್’ಯವರು ನಟಿಸಿರುವ ’ಮರ್ಸಲ್’ ಸಿನಿಮಾದಲ್ಲಿ ಜಿಎಸ್’ಟಿ ಪ್ರಭಾವವನ್ನು ವಿವರಿಸಿ ಕೇಂದ್ರ ಸರ್ಕಾರದ ನೀತಿಯನ್ನು ಪರೋಕ್ಷವಾಗಿ ಟೀಕಿಸಿದ್ದಾರೆ ಎಂಬ ಕಾರಣಕ್ಕಾಗಿ ಇಂದಿನವರೆಗೆ ವಿಜಯ್ ಎಂಬ ಹೆಸರಿನಿಂದಲೇ ಪ್ರಖ್ಯಾತಿ ಹೊಂದಿದ್ದ ಈ ನಟನ Birth Certificate,Voter Id'ಯನ್ನು ಕೆಲವರು ಬಿಡುವು ಮಾಡಿ ಹುಡುಕಿ ತೆಗೆದು,ಈತನ ಹೆಸರು ಜೊಸೇಫ್ ವಿಜಯ್,ಈತ ಕ್ರೈಸ್ತ,ಕ್ರೈಸ್ತನಾದ ಕಾರಣ ಮೋದಿಯವರನ್ನು ಈತ ಟೀಕಿಸುತ್ತಿದ್ದಾನೆ ಎಂದು ಕೆಲವರು ತಮ್ಮ ನೀತಿಗಳನ್ನು ಸಮರ್ಥಿಸುತ್ತಿದ್ದಾರೆ.ಕೇವಲ ಈ ಎರಡು ಉದಾರಹಣೆಗಳು ಮಾತ್ರವಲ್ಲ ಇತ್ತೀಚಿಗೆ ಕೊಲೆಕಟುಕರಿಂದ ಕೊಲೆಯಾದ ಪ್ರಖ್ಯಾತ ಪ್ರರ್ತಕರ್ತೆ ಗೌರಿ ಲಂಕೇಶ್ ರವರ ’ಪತ್ರಿಕೆ’ ಯನ್ನು ’ಪ್ಯಾಟ್ರ‍ಿಕ್’ ಎಂದು ತಿರುಚಿ ಈಕೆಯು ಕ್ರೈಸ್ತಳಾಗಿದ್ದಳು ಎಂದು ಸಾರಿದ ಮೂರ್ಖರೂ ಇದ್ದಾರೆ.ರಾಹುಲ್ ಗಾಂಧಿ ಒಬ್ಬ ಕ್ರೈಸ್ತ,ಆತನ ಮನೆಯಲ್ಲಿ ಚರ್ಚ್ ಇದೆ ಎಂದು ಕೆಲದಿನಗಳ ಹಿಂದೆ ಆತೀ ಬುದ್ಧಿವಂತರೊಬ್ಬರು ಹೇಳಿದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.


ಹಾಗಾದರೆ ದೇಶದಲ್ಲಿ ಸರ್ಕಾರದ ಕೆಲವು ನೀತಿಗಳನ್ನು,ಶೋಷಣೆಗಳನ್ನು,ತುಳಿತಗಳನ್ನು,ಆನ್ಯಾಯಗಳನ್ನು ಟೀಕಿಸುವವರು,ಪ್ರತಿಭಟಿಸುವವರು ಕ್ರೈಸ್ತರು,ಮುಸ್ಲಿಂಮರು ಮಾತ್ರವೇ? ಅಥವಾ ಟೀಕಿಸುತ್ತಾರೆ ಎಂಬ ಕಾರಣಕ್ಕಾಗಿ ಆ ವ್ಯಕ್ತಿಯನ್ನು ಕ್ರೈಸ್ತ,ಮುಸ್ಲಿಂರೊಂದಿಗೆ  ಸಂಬಂಧ ಕಲ್ಪಿಸುವ ಹುನ್ನಾರ ನಡೆಯುತ್ತಿದೆಯೆ? ಅರ್ಥವಾಗದ ಪ್ರಶ್ನೆ.ಆದರೆ ಒಂದಂತೂ ಸತ್ಯ ಟೀಕಿಸುವುದು,ಪ್ರತಿಭಟಿಸುವುದು,ಆನ್ಯಾಯ ವಿರೋಧ ಹೋರಾಡುವುದು ನಾಚಿಕೆಯ ವಿಷಯಗಳಂತೂ ಆಲ್ಲ.ಇದೇ ಕಾರಣಕ್ಕಾಗಿ ಕೆಲವು ಆಸಮಾಜಿಕ ನೀತಿಗಳನ್ನು ನಿರ್ಭೀತಿಯಿಂದ ಟೀಕಿಸುವ,ಆನ್ಯಾಯವನ್ನು ಪ್ರತಿಭಟಿಸುವ ವ್ಯಕ್ತಿಯನ್ನು ಯಾರಾದರೂ ಕ್ರೈಸ್ತರೆಂದು ಕರೆದರೆ ನನಗಂತೂ ಆವರ ಮೇಲೆ ಆಭಿಮಾನ ಹೆಚ್ಚಾಗುತ್ತದೆ.ಏಕೆಂದರೆ ಹೆಚ್ಚಿನ ಕ್ರೈಸ್ತರು ಟೀಕಿಸುವಲ್ಲಿ,ಪ್ರತಿಭಟಿಸುವಲ್ಲಿ ಹಾಗೂ ಹೋರಾಡುವುದರಲ್ಲಿ ಬಹಳ ಹಿಂದೆ.ಸಮಾಜದ ಆನ್ಯಾಯ,ಆನೀತಿಗಳನ್ನು ಸಹಿಸುತ್ತಾರೆ ವಿನಹ ಅಂತಹ ಆನ್ಯಾಯ,ಅನೀತಿಗಳು ತಮ್ಮ ಕಾಲ ಬುಡಕ್ಕೆ ಬಾರದೇ ಪ್ರತಿಭಟಿಸಲು ಹೋಗುವುದಿಲ್ಲ.ಫೇಸ್-ಬುಕ್ಕ್’ನಂತಹ ಸಮಾಜಿಕ ಜಾಲತಾಣದಲ್ಲಿಯೇ ಇದನ್ನು ನಾವು ಗಮನಿಸಬಹುದು.ಹೀಗೆಂದ ಮಾತ್ರಕ್ಕೆ ಕ್ರೈಸ್ತರಿಗೆ ಟೀಕಿಸುವ,ಪ್ರತಿಭಟಿಸುವ ಹಕ್ಕು ಇಲ್ಲವೆಂದಲ್ಲ.ಸರ್ವ ಭಾರತೀಯರಿಗೆ ಹೇಗೆ ದೇಶದಲ್ಲಿ ಹಕ್ಕುಗಳಿವೆಯೋ ಅಂತಹ ಹಕ್ಕುಗಳು ಕ್ರೈಸ್ತರಿಗೂ ಇದೆ ಎಂಬುವುದು ಸತ್ಯ.ಆದರಿಂದ ಆನ್ಯಾಯ,ಆನೀತಿಗಳನ್ನು ನಿರ್ಭೀತಿಯಿಂದ ಟೀಕಿಸುವ,ಪ್ರತಿಭಟಿಸುವ.ವಿಚಾರವನ್ನು ವ್ಯಕ್ತಪಡಿಸುವ ಕೆಲವು ಕ್ರೈಸ್ತರನ್ನು ನಾವು ಕಾಣಬಹುದು.ಆದರೆ ಹೀಗೆ ಅಪರೂಪಕ್ಕೆ ಕಾಣಸೀಗುವ ಕ್ರೈಸ್ತರು,ನಾವುಗಳು ಕ್ರೈಸ್ತರೆಂಬ ಕಾರಣಕ್ಕೆ ಯಾರನ್ನೂ ಟೀಕಿಸುವುದಿಲ್ಲ.ಹಿಂದು,ಮುಸ್ಲಿಂ ಸಮುದಾಯಗಳಲ್ಲಿ ಹೇಗೆ ಆನ್ಯಾಯ,ಆನೀತಿಗಳನ್ನು ಟೀಕಿಸುವವರು,ಪ್ರತಿಭಟಿಸುವರು ಇರುತ್ತಾರೆಯೋ ಹಾಗೆಯೇ ಕ್ರೈಸ್ತರಲ್ಲಿಯೂ ಇದ್ದಾರೆ.ಇಲ್ಲಿರುವುದು ಧಾರ್ಮಿಕ ಅಥವಾ ಸಮುದಾಯದ ಸಂಬಂಧವಲ್ಲ.ಇಲ್ಲಿರುವುದು ಪ್ರಭಾಪ್ರಭುತ್ವದ ನಾಗರೀಕ ಸಂಬಂಧ.ಶೋಷಣೆ,ಆನ್ಯಾಯ,ಆನೀತಿಗಳನ್ನು ಸಹಿಸಿ ಜೀವಿಸಲು ಇದೇನೂ ಸರ್ವಾಡಳಿತವಲ್ಲ.ಇದು ಪ್ರಭಾಪ್ರಭುತ್ವ.


ಇನ್ನೊಂದು ವಿಷಯ;ಯಾವುದೇ ವ್ಯಕ್ತಿ ಕ್ರೈಸ್ತನಾಗಿರಲಿ,ಹಿಂದೂವಾಗಿರಲಿ ಅಥವಾ ಮುಸ್ಲಿಮಾನಾಗಿರಲಿ ಅಥವಾ ಇಲ್ಲದೇ ಇರಲಿ ಆತ ಆನ್ಯಾಯ,ಆನೀತಿ ಹಾಗೂ ಸಮಾಜಿಕ ನ್ಯಾಯದ ಪರ ಧ್ವನಿ ಎತ್ತಿದ್ದರೆ ಅಂತವರ ಬಗ್ಗೆ ನನಗಂತೂ ಆಭಿಮಾನ ಹೆಚ್ಚಾಗುತ್ತದೆ ವಿನಹ ಅದು ನಾಚಿಕೆಯ ವಿಷಯವಂತೂ ಖಂಡಿತವಾಗುವುದಿಲ್ಲ.ಅದರಂತೆ ಪ್ರಕಾಶ್ ರೈ,ವಿಜಯ್,ಕಮಲ್ ಹಾಸನ್,ಸೋನಮ್ ಕಪೂರ್,ರೆಹಮಾನ್,ಅಮಿರ್ ಖಾನ್ ಕ್ರೈಸ್ತನಾಗಿರಲಿ ಅಥವಾ ಇಲ್ಲದೇ ಇರಲಿ ಆವರ ಮೇಲೆ ಬಗ್ಗೆ ಆಭಿಮಾನಪಡಾಬೇಕೆ ವಿನಹ ನಾಚಿಕೆಯಲ್ಲ.