Thursday, July 07, 2016

“ಗ್ರಾಮೀಣ ಆಂಚೆ ನೌಕರರು” ಎಂಬ ಜೀತದಾಳುಗಳು!!?

ನಿರೀಕ್ಷೆಯಂತೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಾಗಿದೆ.ಸದ್ಯದ ಪರಿಸ್ಥಿತಿಯಲ್ಲಿ ಆಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದೆ,ವೇತನ ಮಾತ್ರ ಹಾಗೆಯೇ ಇದೆ ಎಂಬ ಕೇಂದ್ರ ಸರ್ಕಾರಿ ನೌಕರರ ದುಃಖವನ್ನು ಕೇಂದ್ರ ಸರ್ಕಾರವು ಆಲಿಸಿದ್ದು,ಆಂತೆಯೇ ಏಳನೇಯ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇ.23.5 ರಷ್ಟು ಹೆಚ್ಚಿಸಬೇಕು ಎಂದು ಮಾಡಿದ ಶಿಫಾರಸ್ಸು ಜ.1,2016 ರಿಂದಲೇ ಸರ್ಕಾರ ಜಾರಿಗೆ ತರಲು ಸಮ್ಮತ್ತಿಸಿದೆ.ಒಳ್ಳೆಯದು.ಆದರೆ ಇದರ ಮಧ್ಯದಲ್ಲಿ ಇತ್ತ ಪೂರ್ಣ ಪ್ರಮಾಣದ ಕೇಂದ್ರ ಸರ್ಕಾರಿ ನೌಕರರೂ ಆಲ್ಲ,ಆತ್ತ ಖಾಸಗಿ ನೌಕರರು ಆಲ್ಲ ಎಂಬ ಪರಿಸ್ಥಿತಿಯಲ್ಲಿ ದುಡಿಯುತ್ತಿರುವ 'ಗ್ರಾಮೀಣ ಆಂಚೆ ಇಲಾಖಾ ನೌಕಕರ' ಕಥೆ ಏನು? ಎಂಬುದು ಇನ್ನೂ ಕಗ್ಗಂಟಾಗಿಯೆ ಉಳಿದಿದೆ.
'ಕೇಂದ್ರ ಸರಕಾರಿ ನೌಕಕರು' ಎಂಬ ಹಣೆಪಟ್ಟಿ ಇದ್ದಾರೂ,ಇತ್ತ ಮುಳುಗಲು ಇಷ್ಟವಿಲ್ಲದೆ, ಆತ್ತ ದಡದ ಮೇಲೆ ಬರಲು ಸಾಧ್ಯವಾಗದೆ ಸೋತು ಕ್ಲಿಷ್ಟ ಪರಿಸ್ಥಿತಿಯಲ್ಲಿ ಈಜಾಡುತ್ತಿರುವ ನೌಕರರೆಂದರೆ "ಗ್ರಾಮೀಣ ಆಂಚೆ ನೌಕರರು".ಇ-ಮೇಲು,ಕೊರಿಯಾರು,ವಾಟ್ಸ್-ಅಫ್,ಫೇಸ್‌ಬುಕ್ಕು ಎಂಬ ಕೈಬೇರಳುಗಳಿಗೆ ತಲುಪುವ ತಾಂತ್ರಿಕತೆ ಬಂದಾಗಿನಿಂದ ಈ ಆಂಚೆ ವ್ಯವಸ್ಥೆಯು ನಮಗೆ ಹಾಗೂ ಸರಕಾರಕ್ಕೆ ಮರೆತು ಹೋದಂತೆ ಕಾಣುತ್ತಿದೆ.ಸುಮಾರು 150 ವರ್ಷಗಳ ಹಿಂದೆ ಬ್ರಿಟಿಷರಿಂದ ಬಳುವಳಿಯಾಗಿ ಬಂದ ಆಂಚೆ ಇಲಾಖೆಯ 'ಇಲಾಖೇತರ' ಅಂಚೆ ವ್ಯವಸ್ಥೆಯು ಈಗ 'ಗ್ರಾಮೀಣ ಅಂಚೆ ಇಲಾಖೆ' ಎಂಬ ಪದ್ಧತಿಯಾಗಿ ಮುಂದುವರೆದಿದ್ದು,ನಾವು ಸ್ವತಂತ್ರ್ಯರಾಗಿ 69 ವರ್ಷಗಳನ್ನು ಕಳೆಯುತ್ತಿರುವಾಗ,ನಮ್ಮ ಚುನಾಯಿತ ಸರಕಾರವೇ ಈ ಗ್ರಾಮೀಣ ಆಂಚೆ ಇಲಾಖೆಯನ್ನು ಶೋಚನೀಯ ಪರಿಸ್ಥಿತಿಗೆ ದೂಡುತ್ತಿದೆ ಎಂಬಂತೆ ಭಾಸವಾಗುತ್ತಿದೆ.
'ಗ್ರಾಮೀಣ ಆಂಚೆ ಇಲಾಖಾ ನೌಕರ'ರೆಂದು ಮರುನಾಮಕರಣಗೊಂಡಿದ ನಂತರ, ಆಂಚೆ ಇಲಾಖಾ ನೌಕರಿಗೆ ವಿವಿಧ ಹಂತದಲ್ಲಿ 7 ವೇತನ ಆಯೋಗಗಳು ರಚನೆಗೊಂಡಿದ್ದರೂ,ಗ್ರಾಮೀಣ ಆಂಚೆ ಇಲಾಖೆ ನೌಕರರನ್ನು ಈ ವರೆಗೆ ಖಾಯಂ ಕೇಂದ್ರ ಸರ್ಕಾರಿ ನೌಕಕರೆಂದು ಪರಿಗಣಿಸದೆ,ಆಡಳಿತ ವ್ಯವಸ್ಥೆಯು ಜೀತಪದ್ದತಿಯ ಆಳುಗಳು ಎಂಬಂತೆ ನಡೆಸಿಕೊಳ್ಳುತ್ತಿದೆ.
ಹಿಂದಿನ ಇಲಾಖೇತರ ಎನ್ನುವ ವ್ಯವಸ್ಥೆಯು ಆ ಕಾಲದಲ್ಲಿ ಆಂಚೆ ವ್ಯವಸ್ಥೆಗೆ(ಟಪಾಲು ಸಾಗಿಸುವುದು ಮತ್ತು ಬಟುವಾಡೆ ಮಾಡುವುದು) ಸಮಾನಾಗಿ ನೌಕರನು ತನ್ನ ಜೀವನೋಪಾಯಕ್ಕಾಗಿ ಇತರ ನೌಕರಿಯನ್ನು ಹೊಂದಿದ್ದು,ಆತ ಬೀಡುವಿನ ವೇಳೆಯಲ್ಲಿ ಸುಧಾರಿತ ಕೌಟುಂಬಿಕ ಅರ್ಥಿಕತೆಯ ಸಲುವಾಗಿ ಇಲಾಕೇತರ ನೌಕರಿಯನ್ನು ನಿರ್ವಹಿಸುತ್ತಿದ್ದ ಎನ್ನಬಹುದು.ಆದರೆ ಇಂದು ಬದಲಾವಣೆಗೊಂಡ ಪರಿಸ್ಥಿತಿಯಲ್ಲಿ ಗ್ರಾಮೀಣ ಆಂಚೆ ನೌಕರನು ತನ್ನ ಜೀವನೋಪಾಯ ಮತ್ತು ಕುಟುಂಬ ನಿರ್ವಹಣೆಗಾಗಿ ಆಂಚೆ ಇಲಾಖೆಯ ಕೆಲಸ ಮಾತ್ರ ನಿರ್ವಹಿಸಿತ್ತಿದ್ದು,ಆವನ ಜೀವನೋಪಾಯಕ್ಕೆ ಬೇರ್ಯಾವುದೇ ಕೆಲಸ ನಿರ್ವಹಿಸಲು ಸಮಯದ ಆಭಾವ ಹಾಗೂ ಆವನ ಅಧೀನದಲ್ಲಿರುವ ಗ್ರಾಮೀಣ ಆಂಚೆಯ ಜವಾಬ್ದಾರಿಯ ಒತ್ತಡ ಕಾಡುತ್ತಿರುತ್ತದೆ.
ಇಂದಿನ ಬದಲಾವಣೆಗೊಂಡ ಆಂಚೆ ವ್ಯವಸ್ಥೆಯು,ಬೇರೆ ಬೇರೆ ಇಲಾಖೆ ಹಾಗೂ ಖಾಸಗಿ  ಇಲಾಖೆಗಳೊಂದಿಗೆ ಸ್ಪರ್ಧೆಗೆ ಇಳಿಯುವುದರ ಜೊತೆಗೆ,ಎಲ್ಲಾ ತೆರನಾದ ಕೇಂದ್ರ ಸರಕಾರಿ ಕೆಲಸಗಳಾದ ಸುಕನ್ಯ ಸಮೃದ್ಧಿ ಯೋಜನೆ, ಗ್ರಾಮೀಣ ಆಂಚೆ ಜೀವವೀಮೆ, ಆಂಚೆ ಜೀವವಿಮೆ, ಆರ್.ಡಿ, ಎಸ್.ಬಿ, ಟಿ.ಡಿ, ಇ.ಎಂ.ಒ, ಟೆಲಿಪೋನ್ ಬಿಲ್, ಪಿಂಚಣಿ ಸೇವೆ, ಜನ್‌ಧನ್,ಸುರಕ್ಷಾ ಯೋಜನೆ,ನೋಂದಾಯಿತ ಪತ್ರಗಳ ರವಾನೆ,ತ್ವರಿತ ಆಂಚೆ ಸೇವೆ ಹಾಗೂ ಇನ್ನಿತ್ತರ ಯೋಜನೆಗಳನ್ನು ಹಾಗೂ ಜವಾಬ್ದಾರಿಗಳನ್ನು  ಗ್ರಾಮೀಣ ಆಂಚೆ ನೌಕಕರು ನಿರ್ವಹಿಸುವ ಪರಿಸ್ಥಿತಿಯಲ್ಲಿದ್ದರೆ.ಗ್ರಾಮೀಣ ಆಂಚೆ ನೌಕರರಿಗೆ ಐದು ಗಂಟೆಗಳ ಕೆಲಸ ಎಂಬ ನಿಯಮವಿದ್ದರೂ,ಗ್ರಾಮೀಣ ಪ್ರದೇಶಗಳಲ್ಲಿ ಎಂಟರಿಂದ ಹತ್ತುಗಂಟೆಗಳ  ಕೆಲಸವನ್ನು ಈ ಆಂಚೆನೌಕರರು ಯಾವದೇ ಸರಕಾರಿ ಸೌಲಭ್ಯವಿಲ್ಲದೇ( ಗ್ರಾಮದ ಮೂಲೆ ಮೂಲೆಗಳಲ್ಲು ಸೈಕಲ್ ತುಳಿದು ಪತ್ರ ರವಾನಿಸುವ ಆಂಚೆ ಪೇದೆಗಳು ಇನ್ನೂ ಇದ್ದರೆ) ನಿರ್ವಹಿಸುತ್ತಿದ್ದರೆ.ಹಿಂದೆ ಬ್ರಾಂಚ್ ಆಫೀಸ್‌ಗಳಲ್ಲಿ ದಿನಕ್ಕೆ ನೂರಾರು ರೂಪಾಯಿಗಳ ವಹಿವಾಟು ನಡೆಯುವ ಸ್ಥಳದಲ್ಲಿ ಇಂದು ಲಕ್ಷದ ವಹಿವಾಟು ದಿನವೊಂದಕ್ಕೆ ನಡೆಯುತ್ತಿದೆ.
ಆದರೂ ಇಷ್ಟೇಲ್ಲ ಜವಾಬ್ದಾರಿಗಳು ಗ್ರಾಮೀಣ ಆಂಚೆ ನೌಕಕರ ಮೇಲೆ ಹೇರಲ್ಪಟ್ಟರು ಹಾಗೂ ಕೆಲಸದ ಒತ್ತಡ ಜಾಸ್ತಿಯಾದರೂ ಈ ನೌಕಕರ ಸೌಲಭ್ಯಗಳು ಹಾಗೂ ವೇತನ ಏನು ಜಾಸ್ತಿಯಾದಂತೆ ಕಾಣುತ್ತಿಲ್ಲ.'ಕೇಂದ್ರ ಸರ್ಕಾರಿ ನೌಕಕರು' ಎಂಬುದು ಒಂದು ಸಿನೇಮಾದ ಟ್ಯಾಗಲೈನ್‌ನಂತೆ ಮಾತ್ರ ಉಳಿದುಕೊಂಡಿದೆ.ಕೇಂದ್ರ ಸರ್ಕಾರಿ ನೌಕಕರ ರಜೆಗಳನ್ನು ಹೊರತುಪಡಿಸಿ ಇತರ ಯಾವುದೇ ಸೌಲಭ್ಯಗಳು ಇವರಿಗೆ ಪ್ರಾಪ್ತವಾಗುತ್ತಿಲ್ಲ ಎಂಬುದೇ ಒಂದು ವಿಪರ್ಯಾಸ ಸತ್ಯ.ಇಷ್ಟಲ್ಲದೇ ಇಲಾಖಾ ನೌಕಕರಿಗೆ ಸಿಗುವಂತಹ ಸಂಬಳ,ಸಾರಿಗೆ,ಸಾಮಾಜಿಕ ಭದ್ರತೆ ಹಾಗೂ ಇನ್ನಿತ್ತರ ಸೌಲಭ್ಯ ಸವಲತ್ತುಗಳು 'ಗ್ರಾಮೀಣ ಆಂಚೆ ನೌಕರ'ರಿಗೆ ನೀಡದೇ ಸರ್ಕಾರ ಒಂದು ರಿತಿಯಲ್ಲಿ ಮಲತಾಯಿ ಧೋರಣೆಯನ್ನು ಆನುಸರಿಸಿ ಆವರನ್ನು ವಂಚಿಸುತ್ತಾ ಬಂದಿದೆ.
ಕೇಂದ್ರ ಸರಕಾರವು ಇತ್ತೀಚಿಗೆ ಜಾರಿಗೆ ತಂದ 'ಎನ್.ಪಿ.ಎಸ್' ಸಂಪೂರ್ಣ ಆವೈಜ್ಞಾನಿಕ ನಿವೃತ್ತಿ ವೇತನ ಪದ್ದತಿಯತೆ ಕಾಣುತ್ತಿದ್ದು ಇದರಂತೆ 2004ರ ಹಿಂದೆ ವೃತ್ತಿಗೆ ಸೇರಿದ ಗ್ರಾಮೀಣ ಆಂಚೆ ನೌಕಕರಿಗೆ ನಿವೃತ್ತಿ ವೇತನ ಸೌಲಭ್ಯವಿಲ್ಲ ಎಂಬುದು ಈ ಆಂಚೆನೌಕಕರ ಇನ್ನೊಂದು ಗೋಳು.ಕೆಲವು ಗ್ರಾಮಗಳಲ್ಲಿ ಸರಿಯಾದ ಕಟ್ಟಡವಿಲ್ಲದೆ ಗ್ರಾಮೀಣ ಆಂಚೆ ಕಛೇರಿಯನ್ನು ನಿರ್ವಹಿಸುವ ಆನಿವಾರ್ಯತೆಯನ್ನು ಈ ಗ್ರಾಮೀಣ ಆಂಚೆ ನೌಕಕರು ಹೊಂದಿದ್ದಾರೆ.ಇದಲ್ಲದೆ ಈ ಕಟ್ಟಡವನ್ನು ನಿರ್ವಹಿಸಲು ಬೇಕಾದ ಖರ್ಚನ್ನು ಇಲಾಖೆಯು ಪಾವಿಸುತ್ತಿಲ್ಲ ಎಂಬ ಫಿರ್ಯಾದು ಕೇಳಿಬರುತ್ತಿದೆ.ಆಂಚೆ ಇಲಾಖೆಯ ಆಂಚೆ ಸಹಾಯಕರ ಹಾಗೂ ಗ್ರಾಮೀಣ ಆಂಚೆ ಪಾಲಕರ ಜವಾಬ್ದಾರಿಗಳು ಒಂದೇ ರೀತಿಯದಾಗಿದ್ದಾರೂ ಒಂದೇ ರೀತಿಯ ವಿದ್ಯಾರ್ಹತೆಯನ್ನು ನಿಗದಿಪಡಿಸಿ ಗ್ರಾಮೀಣ ಆಂಚೆಪಾಲಕರಿಗೆ ಆಂಚೆಸಹಾಯಕರ ವೇತನಕ್ಕೆ ಸರಿಯಾದ ವೇತನವನ್ನು ನಿಗದಿಪಡಿಸಿದರೆ ನಿರ್ವಹಿಸಿದ ಜವಾಬ್ದಾರಿಗೂ ಪ್ರತಿಫಲ ಸಿಕ್ಕಿದಂತೆ ಆಗುವ ಜೊತೆಗೆ ಉದ್ಯೋಗದಲ್ಲಿ ಆತ್ಮತೃಪ್ತಿಯು ಇರುತ್ತದೆ.ಇದರ ಜೊತೆಗೆ ಆಂಚೆ ಪೇದೆಯ(ಇಲಾಖಾ  ಆಂಚೆ ಪೇದೆ) ಹಾಗೂ ಜಿ.ಡಿ.ಎಸ್.ಎಮ್.ಡಿ(ಗ್ರಾಮೀಣ ಆಂಚೆ ಪೇದೆ) ವಿದ್ಯಾರ್ಹತೆಯ ಜೊತೆಗೆ ವೇತನ ಸರಿಸಮಾನಾಗಿದ್ದರೆ ಗ್ರಾಮೀಣ ಆಂಚೆ ಪೇದೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಜೊತೆಗೆ ಆಸಕ್ತಿಯಿಂದ ನೌಕರಿಯನ್ನು ನಿರ್ವಹಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ.
ಆದರೆ,'ಗ್ರಾಮೀಣ ಆಂಚೆ ನೌಕರ'ರ ಈ ಎಲ್ಲಾ ಗೋಳುಗಳನ್ನು ಕೇಳುವವರು ಯಾರು? ಕೇಂದ್ರ ಸರಕಾರಿ ನೌಕಕರಿಗೆ 7ನೇ ವೇತನ ಆಯೋಗ ರಚನೆಯಾಗಿದ್ದು,ಆಂಚೆ ನೌಕಕರು ಸಹ ಕೇಂದ್ರ ಸರಕಾರಿ ನೌಕಕರು ಆಗಿರುವುದರಿಂದ ಇವರಿಗೂ 7ನೇ ವೇತನ ಆಯೋಗದ ಶಿಫಾರಸ್ಸು ಆನ್ವಹೀಸಬೇಕಾಗುತ್ತದೆ. ದುರಂತವೆಂದರೆ ಆದಾಗ್ಯೂ ಗ್ರಾಮೀಣ ಆಂಚೆ ನೌಕಕರನ್ನು ಏಳನೇಯ ವೇತನ ಆಯೋಗ ವ್ಯಾಪ್ತಿಗೆ ಸೇರಿಸದೆ ಇವರನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ.ಆದರೂ ಈ ಶೋಚನೆಯ ಪರಿಸ್ಥಿತಿಯಲ್ಲೂ ಈ ನೌಕಕರು ತಮ್ಮ ಕರ್ತವ್ಯಗಳನ್ನು ಮರೆತ್ತಿಲ್ಲ.
ನೆನಪಿಡಿ; ಮೊಬೈಲ್, ವಾಟ್ಸ್-ಅಫ್, ಇ-ಮೇಲ್, ಫೇಸ್-ಬುಕ್ ಅದೂ-ಇದೂ ಎಂಬ ತಾಂತ್ರಿಕ ಬೆಳವಣಿಗೆಗಳನ್ನು ನಾವು ಕಂಡುಕೊಂಡರೂ,ಆಂಚೆ ಇಲಾಖೆಯು ನಮಗೆ ಇಂದೂ ಸಹ ಆನಿವಾರ್ಯ.ನಮ್ಮ ನೊಂದಾಹಿತ ಪತ್ರವ್ಯವಹಾರಗಳು ಹಾಗೂ ತ್ವರಿತ ಪತ್ರ ರವಾನೆಗಳಿಗೆ ನಾವೂ ಇಂದೂ ಆಂಚೆ ಇಲಾಖೆಯನ್ನು ಆವಲಂಬಿಸಿರುತ್ತೇವೆ.ಆಂಚೆ ಇಲಾಖೆಯ ನೌಕಕರು ಆದರಲ್ಲೂ ಕಡಿಮೆ ವೇತನದಲ್ಲಿ ದುಡಿಯುವ ಗ್ರಾಮೀಣ ಆಂಚೆ ನೌಕರರು ಬಿಸಿ,ಸೆಕೆ,ಗಾಳಿ,ಮಳೆ ಎಂಬುವುದನ್ನು ಲೆಕ್ಕಿಸದೆ ನಮ್ಮ ಆಗತ್ಯತೆಯನ್ನು ಪೂರೈಸುತಿದ್ದಾರೆ.ಕೆಲವು ಹಿರಿಯ ಗ್ರಾಮೀಣ ಆಂಚೆ ಪೇದೆಗಳು ಆತ್ತ ಸೈಕಲು ತುಳಿಯಲಾಗದೆ,ಇತ್ತ ಮೋಟಾರು ವಾಹನ ಬೀಡಲು ಬಾರದೆ ನಡೆದುಕೊಂಡೆ ಗ್ರಾಮದ ಮೂಲೆ-ಮೂಲೆಗೆ ಪತ್ರ ಹಾಗೂ ಇತರ ಆಂಚೆಯನ್ನು ರವಾನಿಸುತ್ತಿದ್ದರೆ.ತಮಗೆ ಸೌಲಭ್ಯಗಳು ಇಲ್ಲದಿದ್ದರು,ಕೆಲಸದ ಒತ್ತಡದ ನಡುವೆಯೂ,ಆಂಚೆ ಕಛೇರಿಗೆ ತಲುಪುವ ನಮ್ಮನ್ನು ಈ ಆಂಚೆಕಛೇರಿಯ ನೌಕರರು ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ.ಕೆಲವು ಸರ್ಕಾರಿ ಕಛೇರಿಯಲ್ಲಿ ನಡೆಯುವ ವಂಚನೆ ಹಾಗೂ ಉದಾಸೀನತೆ ಈ ನೌಕರಲ್ಲಿ ಕಂಡಬರುವುದಿಲ್ಲ ಎಂದೇ ಹೇಳಬಹುದು.ಇಷ್ಟಾಗ್ಯೂ ಈ ಗ್ರಾಮೀಣ ಆಂಚೆ ನೌಕಕರು ಕೇಂದ್ರ ಸರ್ಕಾರಿ ನೌಕಕರಾದರೂ ಕಡಗಣಿಸಲ್ಪಟ್ಟವರು ಎಂಬುದು ಒಂದು ದುರಾಂತವೇ ಸರಿ. ಹೀಗಾಗಿ ಸಂಬಂಧಿತ ಸರ್ಕಾರ ಆಥವಾ ಇಲಾಖೆ ಒಮ್ಮೆಯಾದರೂ ಇವರತ್ತ ಕಣ್ಣೆತ್ತಿ ನೋಡಲಿ ಎಂಬುದೇ ನಮ್ಮ ಆಶಯ.

(ವಿವಿಧ ಪತ್ರಿಕೆ ಹಾಗೂ ಪತ್ರಗಳನ್ನು ಆಗಾಗ ಸರಿಯಾದ ಸಮಯದಲ್ಲಿ ನಮ್ಮನೆಗೆ ತಲುಪಿಸುವ ನಮ್ಮೂರಿನ ಆಂಚೆ ಪೆದೆಯ ನೋವನ್ನು ಆಲಿಸಿ ಬರೆದ ಲೇಖನ)
-ಮೆಲ್ವಿನ್ ಕೊಳಲಗಿರಿ

No comments:

Post a Comment