Saturday, August 06, 2016

ಎರಡು ಕಿರು ಕಥೆಗಳು


ತಾಯಿ ಗುಬ್ಬಿ ಮತ್ತು ಮರಿ ಗುಬ್ಬಿ


ಮನೆಯ ಮುಂದಿನ ಹಲಸಿನ ಮರದ ಮೇಲೆ ಕುಳಿತು ಏನೊ ಯೋಚಿಸುತ್ತಿದ್ದ ತಾಯಿ ಗುಬ್ಬಿಯ ಬಳಿ ಎಲ್ಲಿಂದಲೊ ಹಾರಿ ಬಂದ ಮರಿ ಗುಬ್ಬಿಯೊಂದು ಬಂದು ಹೀಗೆ ಹೇಳಿತು;
"ಆಮ್ಮ ಆಮ್ಮ"
"ಏನು ಮಗು?"
"ಅಲ್ಲಿ ಏನೋ ತುಂಬಾ ಗಿಡಗಳನ್ನು ನೇಡುತ್ತಿದ್ದರೆ ಆಮ್ಮ.ತುಂಬಾ ಜನ ಸೇರಿದ್ದಾರೆ.ಭಾಷಣ ಬೇರೆ ಮಾಡ್ತಿದ್ದರೆ.ಇನ್ನೇನು ಗಿಡಗಳು ಬೆಳೆದು ಮರಗಳಾಗುತ್ತವೆ.ನಾವಿನ್ನೂ ಆ ಹೊಸ ಮರಗಳಿಗೆ ಶಿಫ್ಟ್ ಆಗೋಣ ಆಮ್ಮ"

ಮರಿಗುಬ್ಬಿಯ ಹುಮ್ಮಸ್ಸು ಕಂಡು ತಾಯಿ ಗುಬ್ಬಿ ಹೇಳಿತು; "ಆಯ್ಯೊ ಮಗನೇ,ಹೆಚ್ಚು ಹಾರಾಡಬೇಡ.ನಮ್ಮ ಆಜ್ಜನ ಕಾಲದಿಂದಲೂ ಆವರು ಹೀಗೆಯೆ ಮಾಡುತ್ತಿದ್ದಾರೆ.ಆದೇನೊ ವನಮಹೋತ್ಸವ ಆಂತೆ.ವರ್ಷ ವರ್ಷ ಜನ ಸೇರುತ್ತಾರೆ,ಗಿಡಗಳನ್ನು ನೇಡುತ್ತಾರೆ.ಆದರೆ ಒಂದೂ ಗಿಡ ಮರವಾದದ್ದನ್ನು ನನ್ನ ಆಜ್ಜನು ನೋಡಿಲ್ಲ.ನಾನು ಕಂಡಿಲ್ಲ"



ಸಾಮೂಹಿಕ ವ್ಯವಸಾಯ


ಸಂಘಟನೆಯ ಆಧ್ಯಕ್ಷನೊಬ್ಬನು ಒಂದು ಪತ್ರಿಕೆಯ ಸಂಪದಾಕರ ಬಳಿ ಬಂದು ಹೀಗೆ ಹೇಳುತ್ತಾನೆ;
"ಸರ್ ನಾವು ನಮ್ಮ ಸಂಘಟನೆಯ ಮುಖಾಂತರ ನಮ್ಮೂರಿನಲ್ಲಿ ಈ ಬಾರಿ ಸಾಮೂಹಿಕ ವ್ಯವಸಾಯವನ್ನು ಹಮ್ಮಿಕೊಂಡಿದ್ದೆವು.ದಯವಿಟ್ಟು ಆ ಕಾರ್ಯಕ್ರಮದ ಪೋಟೊ ಹಾಗೂ ವರದಿಯನ್ನು ತಮ್ಮ ಪತ್ರಿಕೆಯಲ್ಲಿ ಪ್ರಕಟಿಸ ಬೇಕಾಗಿ ನಮ್ಮ ಕೋರಿಕೆ"
"ಸಾಮೂಹಿಕ ವ್ಯವಸಾಯ? ಆದರಲ್ಲಿ ಏನು ವಿಶೇಷ?" ಆಧ್ಯಕ್ಷನ ಮಾತನ್ನು ಆಲಿಸಿದ ಸಂಪಾದಕರ ಪ್ರಶ್ನೆ.
"ಇಲ್ಲಾ ಸರ್,ಈವರೆಗೆ ಯಾರೂ ಮಾಡದಿದ್ದ ಕಾರ್ಯಕ್ರಮವನ್ನು ನಾವು ಹಮ್ಮಿಕೊಂಡಿದ್ದೇವೆ ಸರ್.ಇದು ವಿಶೇಷ ಕಾರ್ಯಕ್ರಮ"
ಸಂಪಾದಕರು ಆಧ್ಯಕ್ಷರಿಗೆ ಸಮಜಾಯಿಸಿ "ಇಲ್ಲಾ ಸರ್, ನೀವು ತಪ್ಪು ತೀಳಿದುಕೊಂಡಿದ್ದಿರಿ.ನಿಮಗೆ ತಿಳಿದಿಲ್ಲ.ನಮ್ಮೂರಿನ ಐತ್ತಪ್ಪಣ್ಣ ಸುಮಾರು ಇಪ್ಪತ್ತು-ಮೂವತ್ತು ವರ್ಷಗಳಿಂದ ವ್ಯವಸಾಯ ಮಾಡುತ್ತಿದ್ದರೆ.ಅದೂ ಆವರು ಏಕಾಂಗಿಯಾಗಿಯೆ"

-ಮೆಲ್ವಿನ್ ಕೊಳಲಗಿರಿ

No comments:

Post a Comment