Sunday, July 10, 2016

ಸದಾಶಿವ'ಚೊ ಧನಿ ಆನಿ ವಿಜಯ ಮಲ್ಯ


ಸದಾಶಿವ ಹ್ಯಾ ದಿಸಾನಿಂ ಆಮ್ಗೆರ್ ಸಾಗೊಳೆಚ್ಯಾ ಕಾಮಾಕ್ ಯೆಂವ್ಚೊ ಕಾಮಾಗಾರ್.ವಾಂವ್ಟಿ ಮ್ಹನಿಸ್.ದೋನ್-ತೀನ್ ವರ್ಸಾಂ ಪುಡೆಂ ತೊ ಕಲ್ಯಾನ್ಪುರ್'ಚ್ಯಾ ಎಕಾ ಟೈಲ್ಸ್ ಕಂಪೆನಿಂತ್ ಮ್ಹಣ್ಜೆಂ ನಳ್ಯಾಂಚಾ ಪ್ಯಾಕ್ಟ್ರೆಕ್ ಕಾಮಾಕ್ ವೆತಾಲೊ.ಉಪ್ರಾಂತ್ ತಿಂ ಪ್ಯಾಕ್ಟರಿ ಬಂಧ್ ಜಾವ್ನ್ ಆತಾಂ ತೊ ಗಿಮ್ಶಿಲ್ಯಾ ದಿಸಾನಿಂ ಆಮ್ಚ್ಯಾಚ್ ಗಾಂವ್ಚ್ಯಾ ಕಾಜುಬಿಯಾಂಚ್ಯಾ ಪ್ಯಾಕ್ಟ್ರೆಕ್ ಕಾಮಾಕ್ ವೆತಾ.ಹ್ಯಾ ಪಾವ್ಶಿಲ್ಯಾ ದಿಸಾನಿಂ ಪ್ಯಾಕ್ಟ್ರೆಂತ್ ಕಾಜುಬಿಯೊ ನಾಂತ್ ಆನಿಂ ಇತರ್ ಕಾಮ್'ಯ್ ನಾ ಮ್ಹಣುನ್ ತ್ಯಾ ಪ್ಯಾಕ್ಟ್ರೆಚ್ಯಾ ಸರ್ವ್ ಕಾಮಾಗಾರಾಂಕ್ ಧನಿಯಾನ್ ರಜಾ ದಿಲಾ.ದೆಕುನ್ ಹ್ಯಾ ದಿಸಾನಿಂ ಥಂಯ್ಸರ್'ಚಿ ಕಾಮಾಗಾರಾಂ ಹೆರ್ ಸುವಾತೆನಿಂ ಕಾಮಾಕ್ ವೆತಾತ್.ತಶೆಂ ಸದಾಶಿವ ಆಮ್ಚ್ಯಾ ಗಾಂವಾಂತ್ ಕೊಣೆಯ್ ಅಪಯ್ಲ್ಯಾರಿಯ್ ಸಾಗೊಳೆಚ್ಯಾ ಕಾಮಾಕ್ ಯೇವ್ನ್ ಪಾವ್ತಾ.

ಕಾಲ್ ಆಮ್ಚೆಂ ಗಾದೆಂ ಕೊಸುಂಕ್ ಆಸ್ಲೆಂ.ಗಾದೆ ಕೊಸ್ಚೆಂ ಆಮ್ಚ್ಯಾ ಸೆಜಾರ್ಚ್ಯಾ ನವೀನಾನ್.ಪುಣ್ ಕೊಸ್ತಾನಾ ದೇಗ್'ಯ್ ಕಾಡಿಜೆ ನೆ.ದೆಕುನ್ ದೇಗ್ ಕಾಡುಂಕ್ ಆನಿಂ ಇಲ್ಲೇಶೆ ಗಾದ್ಯಾಂಕ್ ಸಾರೆಂ ವ್ಹಾವಂವ್ಕ್ ತೊ ಕಾಲ್ ಆಮ್ಗೆರ್ ಎಕಾ ದಿಸಾಚ್ಯಾ ಕಾಮಾಕ್ ಆಯಿಲ್ಲೊ.ಸಕಾಳಿಂಚೊ ನಾಸ್ಟೊ,ದನ್ಪರಾಚೆ ಜೆವಾಣ್ ಆನಿಂ ಸಾಂಜೆಚಿ ಚಾ ಆಮ್ಗೆರ್‌ಚ್.ತಶೆಂ ಕಾಲ್ ದನ್ಪರಾಚೆ ಜೇವ್ನ್,ಇಲ್ಲೆಶೆ ಸುಧಾರ್ಸಿತಾನಾ ಮ್ಹಜೊ ಆನಿಯೆಕ್ ಮಿತ್ರ್ ಪೊಸ್ಟ್‌ಮೆನ್ 'ಆರ್ಸೊ' ಪತ್ರ್ ಘೇವ್ನ್ ಆಮ್ಗೆರ್ ಪಾವ್ಲೊ.ಹ್ಯಾ ಆಂಕ್ಯಾಚಾ ಆರ್ಸೊ ಪತ್ರಾರ್ ಫ್ರಾನಿಸ್ ಕಾಸ್ಸಿಯಾಚೆ 'ಮಂಗ್ಳುರ್ಚೆ ನಳೆಂ' ವಿಶ್ಯಾಂತ್ಲೆ ಲೇಖನ್ ವಯ್ಲ್ಯಾ ವಯ್ರ್‌ಚ್ ಪಳೆವ್ನ್  " ಸದಾಶಿವೆ'ರ್ ಇಂದೆ ಎಕಲ್ನ ಕೊಂಕಣಿ ಪೇಪರ್ಡ್ ವಡಿಲ್ದಾ ವಿಶಯೊಡ್ ಲೇಖನಾ ಬಯ್ದ್‌ಡ್" ಮ್ಹಣುನ್ ತಾಕಾ ಸಾಂಗ್ಲೆಂ.
ತಾಕಾ ಜಾಪ್ ದೀವ್ನ್  "ಎಕಲ್ನಾ ಪ್ಯಾಕ್ಟ್ರಿದ ಬಗ್ಗೆ ಬಯ್ದ್‌ಡಾ?" ಮ್ಹಣುನ್ ತೊ ವಿಚಾರಿ.
"ನೀಗಲ್ನಾ ಆತ್ತ್.ಇಂಚೆನೆ ಚೂರ್ ಮಾಹಿತಿ ಕೊರ್ದ್ ಬರೆತೆರ್" ಮ್ಹಣ್ ಹಾಂವೆ ಮ್ಹಳ್ಳೆಂ.
"ಎಕಲ್ನಾ ಪ್ಯಾಕ್ಟ್ರಿದ ಬರೆವೊಡ್ ಆಂಡಾ ಎಡ್ಡೆನೆ ಬರೆವೊಡ್" ತೊ ಮ್ಹಣಾಲೊ.
"ದಾಯೆಗ್ ಪನ್ಪಾರ್?" ಹಾಂವೆ ವಿಚಾರ್ಲೆ
"ಎಕಲ್ನಾ ಎಂಚಿನ ಎಡ್ಡೆ ದಾನಿಯೆ? ಎರೆಗ್ಲಾ ತಿಕ್ಕಯೇರ್.ನಮ ಬೆಲೆದಗಲೇಗ್ ಲಾಸ್ಟ್ ಮುಟ್ಟಾಲಾ ಬುಡ್ದ್ ಪಾಡ್ದಿಜೆರ್... "ಮ್ಹಣುನ್ ತ್ಯಾ ಪ್ಯಾಕ್ಟ್ರಿಚ್ಯಾ ಧನಿಯಾ ವಿಶ್ಯಾಂತ್ ತಾಣೆಂ ಸಾಗೊಂಕ್ ಸುರು ಕೆಲೆಂ.
****
ಕಲ್ಯಾನ್ಪುರ್'ಚಿ ನಳ್ಯಾಂಚಿ ಪ್ಯಾಕ್ಟರಿ ಸಭಾರ್ ವರ್ಸಾಂಚಿ ಚರಿತ್ರಾ ಆಸ್ಚಿಂ.ಲಾಗಿಂ-ಲಾಗಿಂ ದೆಡ್ಶ್ಯಾಂ ವಯ್ರ್ ಕಾಮಾಗಾರ್ ಪ್ಯಾಕ್ಟ್ರಿ ಬಂಧ್ ಜಾಂವ್ಚ್ಯಾ ಪರ್ಯಾಂತ್ ಘೊಳುನ್ ಆಸ್ಲೆಂ ಖಂಯ್.ಸದಾಶಿವ'ಯ್ ಧಾ-ಭಾರಾ ವರ್ಸಾಂ ಥಾವ್ನ್ ಥಂಯ್ ಕಾಮಾಕ್ ಆಸ್ಲೊ ಮ್ಹಣುನ್ ತೊಚ್ ಮ್ಹಣ್ತಾ.ಆತಾಂ ವಾಡೊನ್ ಯೆಂವ್ಚ್ಯಾ ಪರಿಗತೆಂತ್ ಟೆರೆಸ್ ಘರಾಂ,ಫ್ಲೆಟಾಂ ಮ್ಹಣುನ್ ನಳ್ಯಾಂಚಿ ಗರ್ಜ್ ಉಣಿಂ ಜಾಲಾ.ಆನಿಂ ಹೊ ವಿಷಯ್ ಆಮ್ಕಾಯ್ ಖಳಿತ್ ಅಸ್ಚೊಚ್ ಮ್ಹಣ್ಯಾಂ.ಹ್ಯಾ ಪಾಸುನ್ ಥೊಡೆಂ ಉತ್ಪನ್ನ್ ಜಾಲ್ಲೆಂ ನಳೆಚ್ ವಿಕುನ್ ವಸಾನಾತ್ಲೆಂ,ಪ್ಯಾಕ್ಟ್ರೆಂತ್‌ಚ್ ದಾಸ್ತಾನ್ ಜಾತೆಲೆಂ ಖಂಯ್.ಆಶೆಂ ಪ್ಯಾಕ್ಟ್ರಿ ನಷ್ಟಾನ್ ಚಲ್ತೆಲಿಂ.ತರಿಯ್ ಥಂಯ್ ಘೊಳ್ಚ್ಯಾ ಕಾಮಾಗಾರಾಕ್ ಮಹಿನ್ಯಾಚೊ ಸಾಂಬಾಳ್ ವೇಳಾರ್ ಕಾಮಾಗಾರಾಂಕ್ ಕಿತೆಚ್ ತಕ್ರಾರ್ ನಾಸ್ತಾನಾ ಪಾವೊ ಜಾತಾಲೊ ಖಂಯ್.ತ್ಯಾ ಪಾಕ್ಟ್ರಿಚ್ಯಾ ಧನಿಯಾಚೆ ಪೂತ್ ಆಸ್ಟ್ರೆಲೀಯಾ,ಆಮೇರಿಕ್'ಂತ್ ಕಾಮಾಕ್ ಆಸ್ಲೆಂ ಮ್ಹಣ್ತಾ ಸದಾಶಿವ.ತ್ಯಾ ದೆಕುನ್'ಚ್ ಧನಿಯಾಕ್ ಸಾಂಬಾಳ್ ದೀಂವ್ಕ್ ಸಲೀಸ್ ಜಾತೆಲೆಂ.ಪ್ಯಾಕ್ಟರಿಚ್ಯಾ ಆಕ್ರೇಚಾ ದಿಸಾನಿಂ ಕಿತೆಂ ತೆಂ ಪ್ಯಾಕ್ಟರಿ ಥಾವ್ನ್ ಇನ್‌ಕಾಮ್ ಯೆತಾಲೆಂ ತೆಂ ಕಾಮಾಗಾರಾಕ್‌ಚ್ ತೊ ಧನಿ ದಿತಾಲೊ ಖಂಯ್.ಆಶೆಂ ಕ್ರಮೇಣ್ ಪ್ಯಾಕ್ಟರಿಚೊ ಧನಿ ಪ್ರಾಯೆಸ್ತ್ ಜಾವ್ನ್ ಯೆತಾನಾ,ತಾಚ್ಯಾ ಭುರ್ಗ್ಯಾನಿಂ ತಿಂ ಪ್ಯಾಕ್ಟರಿ ಬಂಧ್ ಕರುಂಕ್ ಉಲೊ ದಿಲೊ ಖಂಯ್.ಪುಣ್ ಧನಿಯಾನ್ ಸುರ್ವೆರ್ ನಾಖುಶೆನ್ ಉಪ್ರಾಂತ್ ಪ್ರಾಯ್ ಆನಿಂ ಭಲಾಯ್ಕೆಚ್ಯಾ ಕಾರಣಾ ನಿಮ್ತಿ ಪ್ಯಾಕ್ಟರಿ ಬಂಧ್ ಕರ್ಚೊ ನಿರ್ಧಾರ್ ಘೆತ್ಲೊ ಮ್ಹಣ್ತಾ.ಪುಣ್ ಪ್ಯಾಕ್ಟರಿ ಬಂಧ್ ಕರ್ತಾ ಮ್ಹಣುನ್ ಕಾಮೆಲ್ಯಾಂಕ್ ಸಭಾರ್ ಮಹಿನ್ಯಾ ಆದಿಚ್ ಸೂಚನ್ ದೀವ್ನ್,ಉಪ್ರಾಂತ್ ಕಾಮೆಲ್ಯಾಂಚೊ ಸರ್ವ್ ಸಾಂಬಾಳ್,ಭವಿಷ್ಯ್ ನಿಧಿ ಆನಿಂ ಇತರ್ ಕಿತೆಯ್ ಆಸ್ಲೆಂ ತೆಂ ಕಾಮೆಲ್ಯಾಂಕ್ ಪಾವೊ ತ್ಯಾ ವೇಳಾರ್ ಧನಿಯಾನ್ ಪಾವಿತ್ ಕೆಲ್ಲೆಂ ಖಂಯ್.ಇತ್ಲೆಚ್ ನ್ಹಯ್ ಸದಾಶಿವ'ನ್ ಸಾಂಗ್ಚೆ ಪ್ರಕಾರ್ ತಿ ಪ್ಯಾಕ್ಟರಿ ಆಸ್ಚೊ ಜಾಗೊ ವಿಕುನ್ ತಾಚೊ ಐವಜ್ ಥಂಯ್ ಚಡಾವತ್ ವರ್ಸಾ ಥಾವ್ನ್ ಕಾಮ್ ಕರುನ್ ಆಸ್ಚ್ಯಾ ಥಾವ್ನ್ ನಿಮಾಣ್ಯಾ ಪರ್ಯಾಂತ್ ವಾಂಟುನ್ ದಿಲಾ ಖಂಯ್.ಆಮ್ಚ್ಯಾಚ್ ಗಾಂವಾಂತ್ ಭಾಡ್ಯಾಚಾ ಘರಾ ಆಸ್ಚೊ ಎಕ್ಲೊ ಗೌಡ ತೊ ತೀನ್ ವರ್ಸಾ ಥಾವ್ನ್ ಥಂಯ್ ಕಾಮಾಕ್ ಆಸ್ಲೊ ತಾಕಾ ಸಾಟ್ ಹಜಾರ್ ರುಪಾಯ್ ಮ್ಹಣಾಸರ್ ಪ್ಯಾಕ್ಟ್ರಿ ಬಂಧ್ ಜಾತೆತ್‌ ಪ್ರಾಪ್ತ್ ಜಾಲ್ಯಾತ್ ಖಂಯ್.

ಮುಕಾರುನ್ "ಎನಾನ್ ಬೊಕ್ಕ್ ಎನ್ನಾ ಪ್ಯಾಕ್ಟ್ರಿನ್ ನಂಬ್‌ದ್ ನಿಗುಲ್ ಮೂಲ್ ಬ್ಯಾಲೆ ಮಲ್ತೊಂದ್ ಇತ್ತರ್, ಉಂದು ಬ್ಯಾಲೆ ನಂಬುದು ಕೆಲವೆರ್ ಬ್ಯಾಂಕ್‌ಡ್ ಸಾಲ ಗೆಯ್ದಾರ್,ಕೆಲವೆರ್ ಜೊಕುಲೆನ್ ಇಂಗ್ಲೀಷ್ ಮಿಡಿಯಮ್ ಶಾಲೆಗ್ ಪಡ್ದಾರ್ ನಿಗಲೆಗ್ ಬೊಂಗಾಂ ಆವೆರೆಗ್ ಬಲ್ಲಿ,ಎನಾನ್ ಎನ್ನ ಜೊಕುಲ್ ತಾಂಕುವೆರ್,ಆಯಿಕೆ ಮೂಲ್ತ ಪುರಾ ನಿಗಲೆಗ್ ಬಟ್‌ದ್ ಕೊರ್ಪಿನಿ" ಮ್ಹಣುನ್ ಸದಾಶಿವ ತಾಚ್ಯಾ ಧನಿಯಾನ್ ಸಾಂಗ್ಲೆಲಿ ಉತ್ರಾಂ ಪರತ್ ಮ್ಹಜೆಶಿ ಸಾಂಗ್ತಾನಾ ತಾಚ್ಯಾ ದೊಳ್ಯಾಂತ್ ಮಂದ್ ಉದಾಕ್ ದೆಂವ್ಲೆ.

ಆನಿ ಮ್ಹಾಕಾ ಕಿಂಗ್ ಫಿಶರ್ ಎರ್‌ಲೈನ್ಸ್'ಚೊ ಧನಿ ವಿಜಯ ಮಲ್ಯ ಆನಿಂ ತಾಚ್ಯಾ ಕಾಮೆಲ್ಯಾಂಚೊ ಉಡಾಸ್ ಆಯ್ಲೊ.

-ಮೆಲ್ವಿನ್ ಕೊಳಲ್‌ಗಿರಿ 

Thursday, July 07, 2016

“ಗ್ರಾಮೀಣ ಆಂಚೆ ನೌಕರರು” ಎಂಬ ಜೀತದಾಳುಗಳು!!?

ನಿರೀಕ್ಷೆಯಂತೆ ಕೇಂದ್ರ ಸರ್ಕಾರಿ ನೌಕರರ ವೇತನ ಹೆಚ್ಚಾಗಿದೆ.ಸದ್ಯದ ಪರಿಸ್ಥಿತಿಯಲ್ಲಿ ಆಗತ್ಯ ವಸ್ತುಗಳ ಬೆಲೆ ದುಬಾರಿಯಾಗುತ್ತಿದೆ,ವೇತನ ಮಾತ್ರ ಹಾಗೆಯೇ ಇದೆ ಎಂಬ ಕೇಂದ್ರ ಸರ್ಕಾರಿ ನೌಕರರ ದುಃಖವನ್ನು ಕೇಂದ್ರ ಸರ್ಕಾರವು ಆಲಿಸಿದ್ದು,ಆಂತೆಯೇ ಏಳನೇಯ ವೇತನ ಆಯೋಗವು ಕೇಂದ್ರ ಸರ್ಕಾರಿ ನೌಕರರ ವೇತನವನ್ನು ಶೇ.23.5 ರಷ್ಟು ಹೆಚ್ಚಿಸಬೇಕು ಎಂದು ಮಾಡಿದ ಶಿಫಾರಸ್ಸು ಜ.1,2016 ರಿಂದಲೇ ಸರ್ಕಾರ ಜಾರಿಗೆ ತರಲು ಸಮ್ಮತ್ತಿಸಿದೆ.ಒಳ್ಳೆಯದು.ಆದರೆ ಇದರ ಮಧ್ಯದಲ್ಲಿ ಇತ್ತ ಪೂರ್ಣ ಪ್ರಮಾಣದ ಕೇಂದ್ರ ಸರ್ಕಾರಿ ನೌಕರರೂ ಆಲ್ಲ,ಆತ್ತ ಖಾಸಗಿ ನೌಕರರು ಆಲ್ಲ ಎಂಬ ಪರಿಸ್ಥಿತಿಯಲ್ಲಿ ದುಡಿಯುತ್ತಿರುವ 'ಗ್ರಾಮೀಣ ಆಂಚೆ ಇಲಾಖಾ ನೌಕಕರ' ಕಥೆ ಏನು? ಎಂಬುದು ಇನ್ನೂ ಕಗ್ಗಂಟಾಗಿಯೆ ಉಳಿದಿದೆ.
'ಕೇಂದ್ರ ಸರಕಾರಿ ನೌಕಕರು' ಎಂಬ ಹಣೆಪಟ್ಟಿ ಇದ್ದಾರೂ,ಇತ್ತ ಮುಳುಗಲು ಇಷ್ಟವಿಲ್ಲದೆ, ಆತ್ತ ದಡದ ಮೇಲೆ ಬರಲು ಸಾಧ್ಯವಾಗದೆ ಸೋತು ಕ್ಲಿಷ್ಟ ಪರಿಸ್ಥಿತಿಯಲ್ಲಿ ಈಜಾಡುತ್ತಿರುವ ನೌಕರರೆಂದರೆ "ಗ್ರಾಮೀಣ ಆಂಚೆ ನೌಕರರು".ಇ-ಮೇಲು,ಕೊರಿಯಾರು,ವಾಟ್ಸ್-ಅಫ್,ಫೇಸ್‌ಬುಕ್ಕು ಎಂಬ ಕೈಬೇರಳುಗಳಿಗೆ ತಲುಪುವ ತಾಂತ್ರಿಕತೆ ಬಂದಾಗಿನಿಂದ ಈ ಆಂಚೆ ವ್ಯವಸ್ಥೆಯು ನಮಗೆ ಹಾಗೂ ಸರಕಾರಕ್ಕೆ ಮರೆತು ಹೋದಂತೆ ಕಾಣುತ್ತಿದೆ.ಸುಮಾರು 150 ವರ್ಷಗಳ ಹಿಂದೆ ಬ್ರಿಟಿಷರಿಂದ ಬಳುವಳಿಯಾಗಿ ಬಂದ ಆಂಚೆ ಇಲಾಖೆಯ 'ಇಲಾಖೇತರ' ಅಂಚೆ ವ್ಯವಸ್ಥೆಯು ಈಗ 'ಗ್ರಾಮೀಣ ಅಂಚೆ ಇಲಾಖೆ' ಎಂಬ ಪದ್ಧತಿಯಾಗಿ ಮುಂದುವರೆದಿದ್ದು,ನಾವು ಸ್ವತಂತ್ರ್ಯರಾಗಿ 69 ವರ್ಷಗಳನ್ನು ಕಳೆಯುತ್ತಿರುವಾಗ,ನಮ್ಮ ಚುನಾಯಿತ ಸರಕಾರವೇ ಈ ಗ್ರಾಮೀಣ ಆಂಚೆ ಇಲಾಖೆಯನ್ನು ಶೋಚನೀಯ ಪರಿಸ್ಥಿತಿಗೆ ದೂಡುತ್ತಿದೆ ಎಂಬಂತೆ ಭಾಸವಾಗುತ್ತಿದೆ.
'ಗ್ರಾಮೀಣ ಆಂಚೆ ಇಲಾಖಾ ನೌಕರ'ರೆಂದು ಮರುನಾಮಕರಣಗೊಂಡಿದ ನಂತರ, ಆಂಚೆ ಇಲಾಖಾ ನೌಕರಿಗೆ ವಿವಿಧ ಹಂತದಲ್ಲಿ 7 ವೇತನ ಆಯೋಗಗಳು ರಚನೆಗೊಂಡಿದ್ದರೂ,ಗ್ರಾಮೀಣ ಆಂಚೆ ಇಲಾಖೆ ನೌಕರರನ್ನು ಈ ವರೆಗೆ ಖಾಯಂ ಕೇಂದ್ರ ಸರ್ಕಾರಿ ನೌಕಕರೆಂದು ಪರಿಗಣಿಸದೆ,ಆಡಳಿತ ವ್ಯವಸ್ಥೆಯು ಜೀತಪದ್ದತಿಯ ಆಳುಗಳು ಎಂಬಂತೆ ನಡೆಸಿಕೊಳ್ಳುತ್ತಿದೆ.
ಹಿಂದಿನ ಇಲಾಖೇತರ ಎನ್ನುವ ವ್ಯವಸ್ಥೆಯು ಆ ಕಾಲದಲ್ಲಿ ಆಂಚೆ ವ್ಯವಸ್ಥೆಗೆ(ಟಪಾಲು ಸಾಗಿಸುವುದು ಮತ್ತು ಬಟುವಾಡೆ ಮಾಡುವುದು) ಸಮಾನಾಗಿ ನೌಕರನು ತನ್ನ ಜೀವನೋಪಾಯಕ್ಕಾಗಿ ಇತರ ನೌಕರಿಯನ್ನು ಹೊಂದಿದ್ದು,ಆತ ಬೀಡುವಿನ ವೇಳೆಯಲ್ಲಿ ಸುಧಾರಿತ ಕೌಟುಂಬಿಕ ಅರ್ಥಿಕತೆಯ ಸಲುವಾಗಿ ಇಲಾಕೇತರ ನೌಕರಿಯನ್ನು ನಿರ್ವಹಿಸುತ್ತಿದ್ದ ಎನ್ನಬಹುದು.ಆದರೆ ಇಂದು ಬದಲಾವಣೆಗೊಂಡ ಪರಿಸ್ಥಿತಿಯಲ್ಲಿ ಗ್ರಾಮೀಣ ಆಂಚೆ ನೌಕರನು ತನ್ನ ಜೀವನೋಪಾಯ ಮತ್ತು ಕುಟುಂಬ ನಿರ್ವಹಣೆಗಾಗಿ ಆಂಚೆ ಇಲಾಖೆಯ ಕೆಲಸ ಮಾತ್ರ ನಿರ್ವಹಿಸಿತ್ತಿದ್ದು,ಆವನ ಜೀವನೋಪಾಯಕ್ಕೆ ಬೇರ್ಯಾವುದೇ ಕೆಲಸ ನಿರ್ವಹಿಸಲು ಸಮಯದ ಆಭಾವ ಹಾಗೂ ಆವನ ಅಧೀನದಲ್ಲಿರುವ ಗ್ರಾಮೀಣ ಆಂಚೆಯ ಜವಾಬ್ದಾರಿಯ ಒತ್ತಡ ಕಾಡುತ್ತಿರುತ್ತದೆ.
ಇಂದಿನ ಬದಲಾವಣೆಗೊಂಡ ಆಂಚೆ ವ್ಯವಸ್ಥೆಯು,ಬೇರೆ ಬೇರೆ ಇಲಾಖೆ ಹಾಗೂ ಖಾಸಗಿ  ಇಲಾಖೆಗಳೊಂದಿಗೆ ಸ್ಪರ್ಧೆಗೆ ಇಳಿಯುವುದರ ಜೊತೆಗೆ,ಎಲ್ಲಾ ತೆರನಾದ ಕೇಂದ್ರ ಸರಕಾರಿ ಕೆಲಸಗಳಾದ ಸುಕನ್ಯ ಸಮೃದ್ಧಿ ಯೋಜನೆ, ಗ್ರಾಮೀಣ ಆಂಚೆ ಜೀವವೀಮೆ, ಆಂಚೆ ಜೀವವಿಮೆ, ಆರ್.ಡಿ, ಎಸ್.ಬಿ, ಟಿ.ಡಿ, ಇ.ಎಂ.ಒ, ಟೆಲಿಪೋನ್ ಬಿಲ್, ಪಿಂಚಣಿ ಸೇವೆ, ಜನ್‌ಧನ್,ಸುರಕ್ಷಾ ಯೋಜನೆ,ನೋಂದಾಯಿತ ಪತ್ರಗಳ ರವಾನೆ,ತ್ವರಿತ ಆಂಚೆ ಸೇವೆ ಹಾಗೂ ಇನ್ನಿತ್ತರ ಯೋಜನೆಗಳನ್ನು ಹಾಗೂ ಜವಾಬ್ದಾರಿಗಳನ್ನು  ಗ್ರಾಮೀಣ ಆಂಚೆ ನೌಕಕರು ನಿರ್ವಹಿಸುವ ಪರಿಸ್ಥಿತಿಯಲ್ಲಿದ್ದರೆ.ಗ್ರಾಮೀಣ ಆಂಚೆ ನೌಕರರಿಗೆ ಐದು ಗಂಟೆಗಳ ಕೆಲಸ ಎಂಬ ನಿಯಮವಿದ್ದರೂ,ಗ್ರಾಮೀಣ ಪ್ರದೇಶಗಳಲ್ಲಿ ಎಂಟರಿಂದ ಹತ್ತುಗಂಟೆಗಳ  ಕೆಲಸವನ್ನು ಈ ಆಂಚೆನೌಕರರು ಯಾವದೇ ಸರಕಾರಿ ಸೌಲಭ್ಯವಿಲ್ಲದೇ( ಗ್ರಾಮದ ಮೂಲೆ ಮೂಲೆಗಳಲ್ಲು ಸೈಕಲ್ ತುಳಿದು ಪತ್ರ ರವಾನಿಸುವ ಆಂಚೆ ಪೇದೆಗಳು ಇನ್ನೂ ಇದ್ದರೆ) ನಿರ್ವಹಿಸುತ್ತಿದ್ದರೆ.ಹಿಂದೆ ಬ್ರಾಂಚ್ ಆಫೀಸ್‌ಗಳಲ್ಲಿ ದಿನಕ್ಕೆ ನೂರಾರು ರೂಪಾಯಿಗಳ ವಹಿವಾಟು ನಡೆಯುವ ಸ್ಥಳದಲ್ಲಿ ಇಂದು ಲಕ್ಷದ ವಹಿವಾಟು ದಿನವೊಂದಕ್ಕೆ ನಡೆಯುತ್ತಿದೆ.
ಆದರೂ ಇಷ್ಟೇಲ್ಲ ಜವಾಬ್ದಾರಿಗಳು ಗ್ರಾಮೀಣ ಆಂಚೆ ನೌಕಕರ ಮೇಲೆ ಹೇರಲ್ಪಟ್ಟರು ಹಾಗೂ ಕೆಲಸದ ಒತ್ತಡ ಜಾಸ್ತಿಯಾದರೂ ಈ ನೌಕಕರ ಸೌಲಭ್ಯಗಳು ಹಾಗೂ ವೇತನ ಏನು ಜಾಸ್ತಿಯಾದಂತೆ ಕಾಣುತ್ತಿಲ್ಲ.'ಕೇಂದ್ರ ಸರ್ಕಾರಿ ನೌಕಕರು' ಎಂಬುದು ಒಂದು ಸಿನೇಮಾದ ಟ್ಯಾಗಲೈನ್‌ನಂತೆ ಮಾತ್ರ ಉಳಿದುಕೊಂಡಿದೆ.ಕೇಂದ್ರ ಸರ್ಕಾರಿ ನೌಕಕರ ರಜೆಗಳನ್ನು ಹೊರತುಪಡಿಸಿ ಇತರ ಯಾವುದೇ ಸೌಲಭ್ಯಗಳು ಇವರಿಗೆ ಪ್ರಾಪ್ತವಾಗುತ್ತಿಲ್ಲ ಎಂಬುದೇ ಒಂದು ವಿಪರ್ಯಾಸ ಸತ್ಯ.ಇಷ್ಟಲ್ಲದೇ ಇಲಾಖಾ ನೌಕಕರಿಗೆ ಸಿಗುವಂತಹ ಸಂಬಳ,ಸಾರಿಗೆ,ಸಾಮಾಜಿಕ ಭದ್ರತೆ ಹಾಗೂ ಇನ್ನಿತ್ತರ ಸೌಲಭ್ಯ ಸವಲತ್ತುಗಳು 'ಗ್ರಾಮೀಣ ಆಂಚೆ ನೌಕರ'ರಿಗೆ ನೀಡದೇ ಸರ್ಕಾರ ಒಂದು ರಿತಿಯಲ್ಲಿ ಮಲತಾಯಿ ಧೋರಣೆಯನ್ನು ಆನುಸರಿಸಿ ಆವರನ್ನು ವಂಚಿಸುತ್ತಾ ಬಂದಿದೆ.
ಕೇಂದ್ರ ಸರಕಾರವು ಇತ್ತೀಚಿಗೆ ಜಾರಿಗೆ ತಂದ 'ಎನ್.ಪಿ.ಎಸ್' ಸಂಪೂರ್ಣ ಆವೈಜ್ಞಾನಿಕ ನಿವೃತ್ತಿ ವೇತನ ಪದ್ದತಿಯತೆ ಕಾಣುತ್ತಿದ್ದು ಇದರಂತೆ 2004ರ ಹಿಂದೆ ವೃತ್ತಿಗೆ ಸೇರಿದ ಗ್ರಾಮೀಣ ಆಂಚೆ ನೌಕಕರಿಗೆ ನಿವೃತ್ತಿ ವೇತನ ಸೌಲಭ್ಯವಿಲ್ಲ ಎಂಬುದು ಈ ಆಂಚೆನೌಕಕರ ಇನ್ನೊಂದು ಗೋಳು.ಕೆಲವು ಗ್ರಾಮಗಳಲ್ಲಿ ಸರಿಯಾದ ಕಟ್ಟಡವಿಲ್ಲದೆ ಗ್ರಾಮೀಣ ಆಂಚೆ ಕಛೇರಿಯನ್ನು ನಿರ್ವಹಿಸುವ ಆನಿವಾರ್ಯತೆಯನ್ನು ಈ ಗ್ರಾಮೀಣ ಆಂಚೆ ನೌಕಕರು ಹೊಂದಿದ್ದಾರೆ.ಇದಲ್ಲದೆ ಈ ಕಟ್ಟಡವನ್ನು ನಿರ್ವಹಿಸಲು ಬೇಕಾದ ಖರ್ಚನ್ನು ಇಲಾಖೆಯು ಪಾವಿಸುತ್ತಿಲ್ಲ ಎಂಬ ಫಿರ್ಯಾದು ಕೇಳಿಬರುತ್ತಿದೆ.ಆಂಚೆ ಇಲಾಖೆಯ ಆಂಚೆ ಸಹಾಯಕರ ಹಾಗೂ ಗ್ರಾಮೀಣ ಆಂಚೆ ಪಾಲಕರ ಜವಾಬ್ದಾರಿಗಳು ಒಂದೇ ರೀತಿಯದಾಗಿದ್ದಾರೂ ಒಂದೇ ರೀತಿಯ ವಿದ್ಯಾರ್ಹತೆಯನ್ನು ನಿಗದಿಪಡಿಸಿ ಗ್ರಾಮೀಣ ಆಂಚೆಪಾಲಕರಿಗೆ ಆಂಚೆಸಹಾಯಕರ ವೇತನಕ್ಕೆ ಸರಿಯಾದ ವೇತನವನ್ನು ನಿಗದಿಪಡಿಸಿದರೆ ನಿರ್ವಹಿಸಿದ ಜವಾಬ್ದಾರಿಗೂ ಪ್ರತಿಫಲ ಸಿಕ್ಕಿದಂತೆ ಆಗುವ ಜೊತೆಗೆ ಉದ್ಯೋಗದಲ್ಲಿ ಆತ್ಮತೃಪ್ತಿಯು ಇರುತ್ತದೆ.ಇದರ ಜೊತೆಗೆ ಆಂಚೆ ಪೇದೆಯ(ಇಲಾಖಾ  ಆಂಚೆ ಪೇದೆ) ಹಾಗೂ ಜಿ.ಡಿ.ಎಸ್.ಎಮ್.ಡಿ(ಗ್ರಾಮೀಣ ಆಂಚೆ ಪೇದೆ) ವಿದ್ಯಾರ್ಹತೆಯ ಜೊತೆಗೆ ವೇತನ ಸರಿಸಮಾನಾಗಿದ್ದರೆ ಗ್ರಾಮೀಣ ಆಂಚೆ ಪೇದೆಯ ಆರ್ಥಿಕ ಪರಿಸ್ಥಿತಿ ಸುಧಾರಿಸುವ ಜೊತೆಗೆ ಆಸಕ್ತಿಯಿಂದ ನೌಕರಿಯನ್ನು ನಿರ್ವಹಿಸಲು ಪ್ರೋತ್ಸಾಹ ನೀಡಿದಂತಾಗುತ್ತದೆ.
ಆದರೆ,'ಗ್ರಾಮೀಣ ಆಂಚೆ ನೌಕರ'ರ ಈ ಎಲ್ಲಾ ಗೋಳುಗಳನ್ನು ಕೇಳುವವರು ಯಾರು? ಕೇಂದ್ರ ಸರಕಾರಿ ನೌಕಕರಿಗೆ 7ನೇ ವೇತನ ಆಯೋಗ ರಚನೆಯಾಗಿದ್ದು,ಆಂಚೆ ನೌಕಕರು ಸಹ ಕೇಂದ್ರ ಸರಕಾರಿ ನೌಕಕರು ಆಗಿರುವುದರಿಂದ ಇವರಿಗೂ 7ನೇ ವೇತನ ಆಯೋಗದ ಶಿಫಾರಸ್ಸು ಆನ್ವಹೀಸಬೇಕಾಗುತ್ತದೆ. ದುರಂತವೆಂದರೆ ಆದಾಗ್ಯೂ ಗ್ರಾಮೀಣ ಆಂಚೆ ನೌಕಕರನ್ನು ಏಳನೇಯ ವೇತನ ಆಯೋಗ ವ್ಯಾಪ್ತಿಗೆ ಸೇರಿಸದೆ ಇವರನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಕಡೆಗಣಿಸಿದೆ.ಆದರೂ ಈ ಶೋಚನೆಯ ಪರಿಸ್ಥಿತಿಯಲ್ಲೂ ಈ ನೌಕಕರು ತಮ್ಮ ಕರ್ತವ್ಯಗಳನ್ನು ಮರೆತ್ತಿಲ್ಲ.
ನೆನಪಿಡಿ; ಮೊಬೈಲ್, ವಾಟ್ಸ್-ಅಫ್, ಇ-ಮೇಲ್, ಫೇಸ್-ಬುಕ್ ಅದೂ-ಇದೂ ಎಂಬ ತಾಂತ್ರಿಕ ಬೆಳವಣಿಗೆಗಳನ್ನು ನಾವು ಕಂಡುಕೊಂಡರೂ,ಆಂಚೆ ಇಲಾಖೆಯು ನಮಗೆ ಇಂದೂ ಸಹ ಆನಿವಾರ್ಯ.ನಮ್ಮ ನೊಂದಾಹಿತ ಪತ್ರವ್ಯವಹಾರಗಳು ಹಾಗೂ ತ್ವರಿತ ಪತ್ರ ರವಾನೆಗಳಿಗೆ ನಾವೂ ಇಂದೂ ಆಂಚೆ ಇಲಾಖೆಯನ್ನು ಆವಲಂಬಿಸಿರುತ್ತೇವೆ.ಆಂಚೆ ಇಲಾಖೆಯ ನೌಕಕರು ಆದರಲ್ಲೂ ಕಡಿಮೆ ವೇತನದಲ್ಲಿ ದುಡಿಯುವ ಗ್ರಾಮೀಣ ಆಂಚೆ ನೌಕರರು ಬಿಸಿ,ಸೆಕೆ,ಗಾಳಿ,ಮಳೆ ಎಂಬುವುದನ್ನು ಲೆಕ್ಕಿಸದೆ ನಮ್ಮ ಆಗತ್ಯತೆಯನ್ನು ಪೂರೈಸುತಿದ್ದಾರೆ.ಕೆಲವು ಹಿರಿಯ ಗ್ರಾಮೀಣ ಆಂಚೆ ಪೇದೆಗಳು ಆತ್ತ ಸೈಕಲು ತುಳಿಯಲಾಗದೆ,ಇತ್ತ ಮೋಟಾರು ವಾಹನ ಬೀಡಲು ಬಾರದೆ ನಡೆದುಕೊಂಡೆ ಗ್ರಾಮದ ಮೂಲೆ-ಮೂಲೆಗೆ ಪತ್ರ ಹಾಗೂ ಇತರ ಆಂಚೆಯನ್ನು ರವಾನಿಸುತ್ತಿದ್ದರೆ.ತಮಗೆ ಸೌಲಭ್ಯಗಳು ಇಲ್ಲದಿದ್ದರು,ಕೆಲಸದ ಒತ್ತಡದ ನಡುವೆಯೂ,ಆಂಚೆ ಕಛೇರಿಗೆ ತಲುಪುವ ನಮ್ಮನ್ನು ಈ ಆಂಚೆಕಛೇರಿಯ ನೌಕರರು ಆತ್ಮೀಯವಾಗಿ ನಡೆದುಕೊಳ್ಳುತ್ತಾರೆ.ಕೆಲವು ಸರ್ಕಾರಿ ಕಛೇರಿಯಲ್ಲಿ ನಡೆಯುವ ವಂಚನೆ ಹಾಗೂ ಉದಾಸೀನತೆ ಈ ನೌಕರಲ್ಲಿ ಕಂಡಬರುವುದಿಲ್ಲ ಎಂದೇ ಹೇಳಬಹುದು.ಇಷ್ಟಾಗ್ಯೂ ಈ ಗ್ರಾಮೀಣ ಆಂಚೆ ನೌಕಕರು ಕೇಂದ್ರ ಸರ್ಕಾರಿ ನೌಕಕರಾದರೂ ಕಡಗಣಿಸಲ್ಪಟ್ಟವರು ಎಂಬುದು ಒಂದು ದುರಾಂತವೇ ಸರಿ. ಹೀಗಾಗಿ ಸಂಬಂಧಿತ ಸರ್ಕಾರ ಆಥವಾ ಇಲಾಖೆ ಒಮ್ಮೆಯಾದರೂ ಇವರತ್ತ ಕಣ್ಣೆತ್ತಿ ನೋಡಲಿ ಎಂಬುದೇ ನಮ್ಮ ಆಶಯ.

(ವಿವಿಧ ಪತ್ರಿಕೆ ಹಾಗೂ ಪತ್ರಗಳನ್ನು ಆಗಾಗ ಸರಿಯಾದ ಸಮಯದಲ್ಲಿ ನಮ್ಮನೆಗೆ ತಲುಪಿಸುವ ನಮ್ಮೂರಿನ ಆಂಚೆ ಪೆದೆಯ ನೋವನ್ನು ಆಲಿಸಿ ಬರೆದ ಲೇಖನ)
-ಮೆಲ್ವಿನ್ ಕೊಳಲಗಿರಿ